ಎಂಡಿಮಿಯಾನ್
	ಗ್ರೀಕ್ ಪುರಾಣಕಥೆಯೊಂದರ ನಾಯಕ: ಸುಂದರ ಕುರಿಗಾಹಿ ಅಥವಾ ಬೇಟೆಗಾರ ಯುವಕ. ಏಷ್ಯಾಮೈನರಿನ ಕೇರಿಯದ ಲ್ಯಾಟ್‍ಮಾಸ್ ಶಿಖರದ ಗುಹೆಯೊಂದರಲ್ಲಿ ಎಂಡಿಮಿಯಾನ್ ಚಿರನಿದ್ರೆಯಲ್ಲಿದ್ದಾಗ ಪ್ರತಿರಾತ್ರಿಯೂ ಇವನ ಬಳಿಗೆ ಚಂದ್ರದೇವತೆ ಸಿಲೀನೀ ಬರುತ್ತಿದ್ದಳಂತೆ. ಈತನಿಗೆ ಈ ನಿದ್ರೆ ಹೇಗೆ ಪ್ರಾಪ್ತಿಯಾಯಿತೆಂಬ ಬಗ್ಗೆ ಎರಡು ಅಭಿಪ್ರಾಯಗಳಿವೆ. ಸ್ವಇಚ್ಛೆಯಿಂದ ಈತ ನಿದ್ರೆಯಲ್ಲಿ ತೊಡಗಿದ್ದನೆಂಬುದು ಒಂದು ಮತ. ಜû್ಯೂಸನ ಶಾಪದಿಂದ ಇವನಿಗೆ ಈ ಸ್ಥಿತಿ ಬಂತೆಂಬುದು ಇನ್ನೊಂದು ಹೇಳಿಕೆ.

	ಎಂಡಿಮಿಯಾನ್ ಸೂರ್ಯನ ಮೂರ್ತೀಕರಣವಿರಬಹುದೆಂದೂ ಅವನ ನಿದ್ರೆ ಸೂರ್ಯ ಮುಳುಗಿದ್ದರ ಸಂಕೇತವೆಂದೂ ಹೇಳಲಾಗಿದೆ.

	ಇಂಗ್ಲಿಷ್ ಕವಿ ಕೀಟ್ಸ್ (1795-1821) ಈ ಕಥೆಯನ್ನು ಆಧರಿಸಿ ಎಂಡಿಮಿಯಾನ್ ಎಂಬ ನಾಲ್ಕು ಭಾಗಗಳ ದೊಡ್ಡ ಕವನವನ್ನು ಬರೆದಿದ್ದಾನೆ.									
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ